ಲೀಡರ್ಡಾ.ಅರುಣ್ ಹೊಸಕೊಪ್ಪ ರವರು ಪಕ್ಷಾತೀತವಾಗಿ ನಡೆಸಿದ ಈ ಸಂದರ್ಶನ ಮಾಲೆಯು ಅನೇಕರ ಮನೆ ಮನ ತಲುಪಿದೆ.

ರಾಜಕೀಯ ಜೀವನದಲ್ಲಿನ ಪಕ್ಷಾತೀತವಾಗಿ ಅನೇಕ ಗಣ್ಯರನ್ನು ಸಂದರ್ಶಿಸಿ, ಅವರ ಬದುಕಿನ ಬೆಳವಣಿಗೆ, ವಯಕ್ತಿಕ ಜೀವನದ ಪರಿಶ್ರಮ, ರಾಜಕೀಯ ಜೀವನದ ನೋವು ನಲಿವುಗಳ ಅನುಭವವನ್ನು ಜನರಿಗೆ ತಿಳಿಸುವ ಪ್ರಯತ್ನವೇ 'ಲೀಡರ್' ಎಂಬ ಕಾರ್ಯಕ್ರಮ. ಇದರ ಪೂರ್ಣ ಕಲ್ಪನೆ ಮತ್ತು ಆಯೋಜನೆಯನ್ನು ಸ್ವತಃ ಡಾ. ಅರುಣ್ ಹೊಸಕೊಪ್ಪ ರವರು ಮಾಡಿ, ಈ ಎಲ್ಲ ಸಂದರ್ಶನಗಳನ್ನು ಇಲೆಕ್ಟ್ರಾನಿಕ್ ಮಾಧ್ಯಮ ಹಾಗು ನೈರುತ್ಯ ಪತ್ರಿಕೆಯಲ್ಲಿ ಪ್ರಸಾರ ಮಾಡಲಾಯಿತು.

ನೈಟಿಂಗೇಲ್ಸ್ ಆಫ್ ಕರ್ನಾಟಕ

ಕರ್ನಾಟಕದ ಎಲ್ಲ ತಾಲ್ಲೂಕು ಮಟ್ಟದ ಪ್ರತಿಭಾವಂತ ಗಾಯಕರ ಶೋಧನೆಯನ್ನು ಮಾಡಿ, ಎಲೆ ಮರೆಯ ಕಾಯಿಯಂತಿರುವ ಅನೇಕ ಗಾಯನ ಪ್ರತಿಭೆಗಳನ್ನು ಗಾನಲೋಕಕ್ಕೆ ಪರಿಚಯ ಮಾಡಿಸುವುದು ಈ ಯೋಜನೆಯ ಉದ್ದೇಶ . ಇದುವರೆಗೂ ರೇಡಿಯೋ ಅಥವಾ ಟಿ ವಿ ಷೋ ಗಳಲ್ಲಿ ಪರಿಚಯವಾಗದ ನೂರಾರು ಪ್ರತಿಭೆಗಳು ಗ್ರಾಮೀಣ ಭಾಗದಲ್ಲಿದ್ದಾರೆ. ಇವರಿಗೆಲ್ಲ ಆಡಿಷನ್ ಮಾಡಿಸಿ, ಆಯ್ದ ೧೦ ಗಾಯಕರಿಗೆ ತರಬೇತಿ ನೀಡಿ, ತಾಲೂಕು ಮಟ್ಟದಲ್ಲಿ ಬೃಹತ್ ವೇದಿಕೆಯಲ್ಲಿ ಗಾಯನಕ್ಕೆ ಅವಕಾಶ ಮಾಡಿಕೊಡಲಾಗುವುದು. ಇದುವರೆಗೂ ನೂರಾರು ಪ್ರತಿಭೆಗಳು ಈ ಯೋಜನೆಯ ಮೂಲಕ ಬೆಳಕಿಗೆ ಬಂದಿದ್ದಾರೆ.

ನೈರುತ್ಯ ಪತ್ರಿಕೆ

ನ್ಯೆರುತ್ಯ ಪತ್ರಿಕೆಯು ( /2015/64556) ಶೈಕ್ಷಣಿಕ ಕ್ಷೇತ್ರದ ಬಗ್ಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ ಆರಂಭಗೊಂಡ ಹೊಸತನದ ಕನ್ನಡ ಮಾಸ ಪತ್ರಿಕೆ. ಇದು ಶೈಕ್ಷಣಿಕ ವಿಚಾರಗಳ ಜೊತೆಗೆ ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ಆರೋಗ್ಯ, ಯೋಗ, ವಿಜ್ಞಾನ, ಕ್ರೀಡೆ, ಸಿನಿಮಾ ಮುಂತಾದವುಗಳ ಕುರಿತಾದ ಲೇಖನಗಳನ್ನು ಒಳಗೊಂಡಿರುತ್ತದೆ. ಶೈಕ್ಷಣಿಕ ಕ್ಷೇತ್ರದ ಒಳ-ಹೊರಗೂ ಇರುವ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಪ್ರಯತ್ನ ಮಾಡುತ್ತಿದೆ. ನಿಷ್ಪಕ್ಷಪಾತ ನಿಲುವು, ಸಾಮಾಜಿಕ ಕಳಕಳಿಯನ್ನು ಹೊಂದಿದ್ದು, ವಿಭಿನ್ನ ಬಗೆಯ ಕಥೆ, ಕವನ, ವಿಮರ್ಶೆ, ಪ್ರಚಲಿತ ವಿದ್ಯಾಮಾನಗಳನ್ನು ಇದು ಒಳಗೊಂಡಿದೆ. ವಿದ್ಯಾರ್ಥಿಗಳಿಗೆ ಪೂರಕವಾದ ಪಠ್ಯೇತರ ಚಟುವಟಿಕೆಗಳ ಕುರಿತು ನಮ್ಮ ಪತ್ರಿಕೆಯಲ್ಲಿ ಲೇಖನಗಳು ಪ್ರಕಟವಾಗುತ್ತಿವೆ. ಈ ಪತ್ರಿಕೆ ಕರ್ನಾಟಕದಾದ್ಯಂತ ಪ್ರಸಾರವನ್ನು ಹೊಂದಿದೆ. ಈ ಪತ್ರಿಕೆಯಲ್ಲಿ ಆನೇಕ ಹೊಸ ಬರಹಗಾರರ ಪ್ರತಿಭೆಯ ಅನಾವರಣಕ್ಕೆಅವಕಾಶ ನೀಡಿದೆ. ಹಾಗೆಯೆ ಪುಸ್ತಕದಡೆಗೆ ಮತ್ತೆ ಜನರನ್ನು ಕರೆ ತರುವ ಪ್ರಯತ್ನ ಮಾಡಲಾಗುತ್ತಿದೆ.

Image
Image
Image

ನ್ಯೆರುತ್ಯ ಪತ್ರಿಕೆ: ರಾಜ್ಯದಲ್ಲಿನ ಎಲ್ಲ ಕ್ಷೇತ್ರದ ಗಣ್ಯರ ಮುಖಪುಟಗಳಿಂದ ರಾರಾಜಿಸಿರುವ ನಮ್ಮ ಪತ್ರಿಕೆಯಲ್ಲಿ, ದಿಗ್ಗಜರ ಪರಿಚಯ ಮತ್ತು ಸಂದರ್ಶನವನ್ನು ಪ್ರಕಟಿಸಲಾಗಿದೆ. ದೇವೇಗೌಡರು, ದೇವರಾಜ ಅರಸ್,ಪೂಜ್ಯ ಶಿವಕುಮಾರಸ್ವಾಮಿಗಳು ನರೇಂದ್ರ ಮೋದಿ, ಖ್ಯಾತ ಗಾಯಕ ಎಸ್ ಪಿ ಬಾಲಸುಬ್ರಮಣ್ಯಮ್ , ಡಾ.ರಾಜಕುಮಾರ್ ಇತ್ಯಾದಿ.